ಲಾರಿಕ್ ಆಮ್ಲ ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ . ಲಾರಿಕ್ ಆಮ್ಲ ಮೊನೊ ಕಾರ್ಬೋಕ್ಷಿಲ್ ಆಮ್ಲಗಳ ಸಮೂಹಕ್ಕೆ/ಗ್ರೂಪ್ ಗೆ ಸೇರಿದ ಆಮ್ಲವಾಗಿದೆ. ಇದು ಬೆಳ್ಳಗೆ ಇದ್ದು, ಪುಡಿ ರೂಪದಲ್ಲಿರುತ್ತದೆ. ಸಾಬೂನ್ ತರಹದ ವಾಸನೆಯನ್ನು ನೀಡುತ್ತದೆ. == ಪರಿಚಯ == ಹೈಡ್ರೋ ಕಾರ್ಬನ್ ಸರಪಳಿಯ ಒಂದು ಅಂಚುವಿನಲ್ಲಿ (ಕಾರ್ಬೋಕ್ಷಿಲ್)ಸಮೂಹ ಇದ್ದ ಆಮ್ಲವನ್ನು 'ಮೊನೋಕಾರ್ಬಕ್ಷಿಲ್ ಆಮ್ಲ' ಅನ್ನುತ್ತಾರೆ. ಲಾರಿಕ್ ಆಮ್ಲದ ಹೈಡ್ರೋ ಕಾರ್ಬನ್ ಸರಪಳಿಯ ಒಂದು ಅಂಚುನಲ್ಲಿ ಒಂದೇ (ಕಾರ್ಬೋಕ್ಷಿಲ್)ಸಮೂಹ ಇರುವುದರಿಂದ ಈ ಆಮ್ಲವನ್ನು ಮೊನೋಕಾರ್ಬಕ್ಷಿಲ್ ಆಮ್ಲವು ಎಂದು ಕರೆಯಲಾಗುತ್ತದೆ. ಒಂದು ಲಾರಿಕ್ ಕೊಬ್ಬಿನ ಆಮ್ಲದ ಅಣುವಿನಲ್ಲಿ 12 ಕಾರ್ಬನ್, 24 ಹೈಡ್ರೋಜನ್ ಮತ್ತು ಎರಡು ಆಕ್ಸಿಜನ್ ಪರಮಾಣುಗಳಿರುತ್ತವೆ. ಆಮ್ಲದ ಹೈಡ್ರೋಕಾರ್ಬನ್ ಸರಪಳಿಯಲ್ಲಿ ಇರುವ ಕಾರ್ಬನ್ –ಕಾರ್ಬನ್ ಪರಮಾಣುಗಳ ಮಧ್ಯದಲ್ಲಿ ದ್ವಿಬಂಧ ಇಲ್ಲದಂತಾ ಆಮ್ಲಗಳನ್ನು ಪರ್ಯಾಪ್ತ ಆಮ್ಲಗಳು ಎನ್ನುತ್ತಾರೆ. === ಆಮ್ಲದ ಭೌತಿಕ ಗುಣಗಳ ವಿವರಣೆ === ಲಾರಿಕ್ ಆಮ್ಲ ಬೆಳ್ಳಗಾಗಿರುತ್ತದೆ.ಘನರೂಪದಲ್ಲಿರುತ್ತದೆ.ಸಾಬೂನ್ ಅಥವಾ ಬೇ ಎಣ್ಣೆ ವಾಸನೆ ಹೊಂದಿರುತ್ತದೆ.ಆಮ್ಲದ ಶಾಸ್ತ್ರೀಯ ಹೆಸರು:'- ಡೊಡೆಕನೋಯಿಕ್ ಆಸಿಡ್(- ). ಫಾರ್ಮುಲಾ:C12H24O2.ನಿರ್ಮಾಣ ಅಥವಾ ವಿನ್ಯಾಸ ಫಾರ್ಮುಲಾ:CH3(CH2)10CO2H ಲಾರಿಕ್ ಆಮ್ಲದ ಲಕ್ಷಣಗಳ ಪಟ್ಟಿ == ಲಭ್ಯತೆ == ಕೊಬ್ಬರಿ ಎಣ್ಣೆ,ಮತ್ತು ಪಾಮ್ ಕೆರ್ನಲ್ ಎಣ್ಣೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ . ಲಾರಿಕ್ ಆಮ್ಲ ಹೆಚ್ಚಿನ ಪ್ರತಿಶತ ದಲ್ಲಿದ್ದ ಎಣ್ಣೆಗಳ ಪಟ್ಟಿ == ಉಪಯೋಗಗಳು == ಫ್ಲೂ,ಸ್ವೈನ್ ಫ್ಲೂ,ವೈರಲ್ ಇನ್ಪೆಕ್ಷನ್,ಜ್ವರ ಔಷದಗಳ ತಾಯಾರಿಕೆಯಲ್ಲಿ ಬಳಸುತ್ತಾರೆ.ಸಾಬೂನ್ ಗಳ ತಯಾರಿಯಲ್ಲಿ ಉಪಯೋಗಿಸ್ತಾರೆ.ತಾಯಿಯಿಂದ ಮಗುವಿಗೆ HIVಸಂಕ್ರಮಣ ಆಗುವುದನ್ನು ತಡೆಹಿಡಿಯುತ್ತದೆ. ಮಕ್ಕಳ ಸಾಬೂನ್ ತಯಾರಿಕೆಯಲ್ಲಿ,ಶಾಂಫೊ ನಲ್ಲಿ ಉಪಯೋಗಿಸ್ತಾರೆ. ಕಾಸ್ಮೋಟಿಕ್ಸುಯಲ್ಲಿ ಬಳಸುತ್ತಾರೆ. ಗ್ರೀಜು ತಯಾರಿಕೆಯಲ್ಲಿ ವಿನಿಯೋಗಮಾಡುತ್ತಾರೆ. == ಇವುಗಳನ್ನು ನೋಡಿ == ಪರ್ಯಾಪ್ತ ಕೊಬ್ಬಿನ ಆಮ್ಲ‎ ಬ್ಯುಟಿರಿಕ್ ಆಮ್ಲ ಕಾಪ್ರೋಯಿಕ್ ಆಮ್ಲ‎ ಕಾಪ್ರಿಕ್ ಆಮ್ಲ == ಹೊರಗಿನ ಕೊಂಡಿಗಳು == ://../ChemicalProductProperty_EN_CB0357278. == ಉಲ್ಲೇಖ ==